ದುಬೈ, ಡಿ. ೨೭: ಕಾರ್ಮಿಕರ ಕುಟುಂಬಗಳಿಗೆ ಅವರ ವೃತ್ತಿಯ ಬದಲಿಗೆ ಆರ್ಥಿಕ ಸ್ಥಾನಮಾನ ಆಧರಿಸಿ ಶಾಶ್ವತ ವಾಸ್ತವ್ಯ ವೀಸಾಗಳನ್ನು ನೀಡಲು ಸೌದಿ ಅರೇಬಿಯಾ ಸರಕಾರ ನಿರ್ಧರಿಸಿದ್ದು, ಗಡಿಪಾರು ಬೆದರಿಕೆ ಎದುರಿಸುತ್ತಿರುವ ಭಾರತೀಯರು ಸೇರಿದಂತೆ ಇತರರಿಗೆ ಇದು ವರವಾಗಿ ಪರಿಣಮಿಸಿದೆ.
ಈ ಹಿಂದೆ ಎಂಜಿನಿಯರ್, ಡಾಕ್ಟರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಬಿಳಿ ಕಾಲರ್‌ನ ಉದ್ಯೋಗಿಗಳಿಗೆ ಮಾತ್ರ ಶಾಶ್ವತ ವಸತಿ ಹಾಗೂ ಪ್ರವಾಸ ವೀಸಾಗಳನ್ನು ನೀಡ ಲಾಗುತ್ತಿತ್ತು. ಪ್ರಸ್ತುತ ಆರ್ಥಿಕವಾಗಿ ಸಬಲರಾಗಿರುವ ಎಲ್ಲರಿಗೂ ಈ ವೀಸಾವನ್ನು ನೀಡಲು ಸರ ಕಾರ ನಿರ್ಧರಿಸಿದೆ ಎಂದು ಸೌದಿ ವಿದೇಶ ಸಚಿವಾಲಯ ಹೇಳಿದೆ.
ರಿಯಾದ್‌ನಲ್ಲಿನ ಸಚಿವಾಲಯದ ಕಚೇರಿಯು ಕಳೆದ ವಾರ ಮೂರು ದಿನಗಳ ಕಾಲ ಈ ವೀಸಾ ವಿತರಿಸಿ ಬಳಿಕ ಸ್ಥಗಿತಗೊಳಿಸಿತ್ತು. ಮುಂದಿನ ತಿಂಗಳಲ್ಲಿ ಈ ಸೇವೆ ಮತ್ತೆ ಆರಂಭಗೊಳ್ಳುವ ನಿರೀ ಕ್ಷೆಯಿದೆ ಎಂದು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
ಸೌಜನ್ಯ: ಉದಯವಾಣಿ